MP Tejasvi Surya : `ಆರ್ಟಿಕಲ್ 370 ಭಾರತದ ಏಕೀಕರಣದಲ್ಲಿ ಸಾಂಸ್ಕೃತಿಕ, ಮಾನಸಿಕ ತಡೆಗೋಡೆ`
370 ನೇ ವಿಧಿಯು ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ಏಕೀಕರಣದ ಹಾದಿಯಲ್ಲಿ ಸಾಂವಿಧಾನಿಕ ತಡೆಗೋಡೆ ಮಾತ್ರವಲ್ಲ, ಸಾಂಸ್ಕೃತಿಕ ಮತ್ತು ಮಾನಸಿಕ ಅಡಚಣೆಯಾಗಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಶ್ರೀನಗರ : 370 ನೇ ವಿಧಿಯು ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ಏಕೀಕರಣದ ಹಾದಿಯಲ್ಲಿ ಸಾಂವಿಧಾನಿಕ ತಡೆಗೋಡೆ ಮಾತ್ರವಲ್ಲ, ಸಾಂಸ್ಕೃತಿಕ ಮತ್ತು ಮಾನಸಿಕ ಅಡಚಣೆಯಾಗಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಇಂದು ಸಂಸದ ತೇಜಸ್ವಿ ಸೂರ್ಯ ಶ್ರೀನಗರ ಲಾಲ್ ಚೌಕ್‌ನಿಂದ ಕಾರ್ಗಿಲ್ ವಾರ್ ಮೆಮೋರಿಯಲ್ ವರೆಗಿನ ಮೊಟ್ಟಮೊದಲ ತಿರಂಗಾ ಬೈಕರ್ಸ್ ರ‍್ಯಾಲಿ ಉದ್ಘಾಟನೆಗೆ ಆಗಮಿಸಿದ್ದಾರೆ. ನಗರದ 'ಘಂಟಾ ಘರ್' (ಗಡಿಯಾರ ಗೋಪುರ)ದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಕಶ್ಮೀರ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಮತ್ತು ಕಣಿವೆಯು ಈಗ "ಭಯೋತ್ಪಾದನೆಯಿಂದ ಮುಕ್ತವಾಗುತ್ತಿದೆ" ಎಂದುರು.
ಇದನ್ನೂ ಓದಿ : ಸೋನಿಯಾ ಗಾಂಧಿಗೆ ಸಮನ್ಸ್: ಇಡಿ ವಿರುದ್ಧ ಪ್ರತಿಭಟಿಸುತ್ತಿದ್ದ ರಾಹುಲ್ ಗಾಂಧಿ ಬಂಧನ
ಹಿಂದಿನ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಆರ್ಟಿಕಲ್ 370 ಅನ್ನು ಆಗಸ್ಟ್ 2019 ರಲ್ಲಿ ಕೇಂದ್ರವು ರದ್ದುಗೊಳಿಸಿತು.
ಇನ್ನು ಮುಂದುವರೆದು ಮಾತನಾಡಿದ ಅವರು, ಕಾಶ್ಮೀರವು ಭಯೋತ್ಪಾದನಾ ಮುಕ್ತವಾಗಿ ಮತ್ತು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ನಾವು ಈ ಹಿಂದೆ ಪ್ರತಿದಿನ ಭಯೋತ್ಪಾದಕ ದಾಳಿ, ಕಲ್ಲು ತೂರಾಟ ಮತ್ತು ಹುರಿಯತ್ ಹೊರಡಿಸಿದ ಕ್ಯಾಲೆಂಡರ್‌ಗಳ ಬಗ್ಗೆ ಕೇಳುತ್ತಿದ್ದೆವು ಮತ್ತು ಓದುತ್ತಿದ್ದೆವು, ಆದರೆ ಇಂದು ಅದೇ ಕಾಶ್ಮೀರವು ತನ್ನ ಜಲವಿದ್ಯುತ್ ಯೋಜನೆಗಳಿಗೆ ಹೆಸರುವಾಸಿಯಾಗಿದೆ. ಹೊಸ ಎಕ್ಸ್‌ಪ್ರೆಸ್‌ವೇ, ಐಐಟಿ, ಎಐಐಎಂಎಸ್, ಐಐಎಂಗಳು, ಹೊಸ ಕೇಂದ್ರೀಯ ವಿಶ್ವವಿದ್ಯಾಲಯಗಳ ಸ್ಥಾಪನೆ ಹೀಗೆ ಅಭಿವೃದ್ಧಿಯ ಹೊಸ ಆಯಾಮಗಳನ್ನು ಪಡೆದುಕೊಂಡಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು 370 ಅನ್ನು ರದ್ದುಗೊಳಿಸಿದ್ದೆ ಕರಣ ಎಂದರು.
ಆರ್ಟಿಕಲ್ 370 ರ ಹಿಂಪಡೆಡಿದ್ದರಿಂದ ಕಾಶ್ಮೀರದಲ್ಲಿ ಮಹಿಳಾ ಸಬಲೀಕರಣ, ಮೀಸಲಾತಿ ವರ್ಗ
370 ನೇ ವಿಧಿಯು ಸಾಂಸ್ಕೃತಿಕ ಮತ್ತು ಮಾನಸಿಕ ತಡೆಗೋಡೆಯಾಗಿದೆ . "ಇದು "ಏಕ್ ಭಾರತ್, ಶ್ರೇಷ್ಠ ಭಾರತ" ನ ಸಾಂವಿಧಾನಿಕ ದೃಷ್ಟಿಕೋನವನ್ನು ಪೂರ್ಣಗೊಳಿಸಲು ನಮಗೆ ಅವಕಾಶ ನೀಡಲಿಲ್ಲ.
"370 ನೇ ವಿಧಿ ಇದ್ದಾಗ, ಕಾಶ್ಮೀರದ ಯುವಕರು ಎಲ್ಲಾ ಅವಕಾಶಗಳಿಂದ ವಂಚಿತರಾಗಿದ್ದರು. ಶಿಕ್ಷಣಕ್ಕಾಗಿ, ಅವರು ದೆಹಲಿ, ಪುಣೆ ಮತ್ತು ಬೆಂಗಳೂರಿಗೆ ಹೋಗಬೇಕಾಗಿತ್ತು. ಆದರೆ ವಿಶ್ವ ದರ್ಜೆಯ ಶಿಕ್ಷಣವು ಈಗ ಕಾಶ್ಮೀರದಲ್ಲಿ ಮಾತ್ರ ಲಭ್ಯವಿದೆ. ಈಗ ಅವರು ಕಾಶ್ಮೀರ ಬಿಟ್ಟು ಹೋಗುವ ಅವಶ್ಯಕತೆ ಇಲ್ಲ. ಇದು ಪಿಎಂ ಮೋದಿ ಅವರು ತಂದಿರುವ ಪರಿವರ್ತನೆ ಎಂದರು.
ಆರ್ಟಿಕಲ್ 370 ರದ್ದತಿಯು ಕೇಂದ್ರಾಡಳಿತ ಪ್ರದೇಶದಲ್ಲಿ ಮಹಿಳೆಯರು ಮತ್ತು ಮೀಸಲಾತಿ ವರ್ಗದ ಜನರಿಗೆ ಅಧಿಕಾರ ನೀಡಿದೆ ಎಂದರು.
ಸ್ವಾತಂತ್ರ್ಯದ ನಂತರ, ಶ್ಯಾಮ ಪ್ರಸಾದ್ ಮುಖರ್ಜಿ ಅವರು ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣ ಸಾಂವಿಧಾನಿಕ ಏಕೀಕರಣಕ್ಕೆ ಕರೆ ನೀಡಿದರು ಮತ್ತು ಆ ಕೆಲಸವನ್ನು ಪೂರೈಸಿದವರು ಪಿಎಂ ಮೋದಿ. ಕಾಶ್ಮೀರದಲ್ಲಿ ಪ್ರವಾಸೋದ್ಯಮ ಮತ್ತು ಭಯೋತ್ಪಾದನೆ ಸಹಬಾಳ್ವೆ ನಡೆಸಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ : ಕಾರ್ಗಿಲ್ ವಿಜಯ್ ದಿವಸ್: ಪಾಕ್ ಕ್ರೂರಿಗಳ ಹುಟ್ಟಡಗಿಸಲು ವೀರ ಯೋಧರಿಗೆ ಸಹಾಯ ಮಾಡಿದ್ದರು ಈ ಜನ!
"ಕಾಶ್ಮೀರವು ತನ್ನ ಇತಿಹಾಸದಲ್ಲಿ ಈ ವರ್ಷವೇ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿದೆ. ಪ್ರವಾಸೋದ್ಯಮದಿಂದಾಗಿ ಲಕ್ಷಾಂತರ ಯುವಕರು ಉದ್ಯೋಗಾವಕಾಶಗಳನ್ನು ಪಡೆದುಕೊಂಡಿದ್ದಾರೆ. ಇದರಿಂದ ಒಂದು ವಿಷಯ ಸಾಬೀತಾಗಿದೆ, ಪ್ರವಾಸೋದ್ಯಮ ಮತ್ತು ಭಯೋತ್ಪಾದನೆ ಸಹ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.
"ಕಾಶ್ಮೀರದ ಯುವಕರು ಇಂದು ಭಯೋತ್ಪಾದನೆಯ ವಿರುದ್ಧ ಇದ್ದಾರೆ, ಅದನ್ನು ಕೊನೆಗೊಳಿಸಲು ಮತ್ತು ಪ್ರವಾಸೋದ್ಯಮದಲ್ಲಿ ಹೊಸ ಅವಕಾಶಗಳನ್ನು ಪಡೆಯಲು ಬಯಸುತ್ತಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇದು ಕಾಶ್ಮೀರದ ಯುವಜನರು ಪ್ರಾರಂಭಿಸಿದ ಅಭಿವೃದ್ಧಿಯ ಹೊಸ ಮಾರ್ಗವಾಗಿದೆ" ಎಂದು ಹೇಳಿದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.